Friday, September 6, 2024

ಕಟೀಲು ಕ್ಷೇತ್ರ ಶೈಕ್ಷಣಿಕ ಮತ್ತು ಯಕ್ಷಗಾನಗಳ ಪಾರಂಪರಿಕ ಕ್ಷೇತ್ರ - ಸುರೇಶ್ ಕಟೀಲ್

ಕಟೀಲು:ಕಟೀಲು‌ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾಗಿದ್ದರೂ ಶೈಕ್ಷಣಿಕ ಕ್ಷೇತ್ರವಾಗಿಯೂ ಬೆಳೆಯುತ್ತಿದೆ. ಯಕ್ಷಗಾನ ಕಲೆಗೆ   ಹಲವು ಮೇಳಗಳ ಮೂಲಕ  ಯಕ್ಷಗಾನ ಸೇವೆಯಾಟಗಳ ಮೂಲಕ ಭಕ್ತಾ ದಿಗಳ ಇಷ್ಟಾರ್ಥವನ್ನು ಈಡೇರಿಸುತ್ತಾ ಬಂದಿರುವುದು ಕ್ಷೇತ್ರ ದ ಮಹಿಮೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಸುರೇಶ್ ಕಟೀಲ್ ಹೇಳಿದರು.
ಅವರು ಕಟೀಲು ಸರಸ್ವತಿ ಸಭಾಭವನದಲ್ಲಿ‌ ಸೆ.5ರಂದು‌ ಜರಗಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ  
ಶಿಕ್ಷಕ ಸಾಹಿತಿಗಳ ರಾಜ್ಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಟಿಯಲ್ಲಿ ಕಟೀಲು ಕ್ಷೇತ್ರದ ಇತಿಹಾಸ ಹಾಗೂ ಕ್ಷೇತ್ರ ಪರಿಚಯ ವಿಷಯದಲ್ಲಿ ಮಾತನಾಡಿದರು.
ಉಡುಪಿ ಜ್ಯೋತಿಷ್ಯ ಪಂಡಿತ ಸಂಸ್ಕೃತ ವಿದ್ವಾಂಸ ರಘುಪತಿ ಭಟ್  'ಹರಮುನಿದರೆ ಗುರುಕಾಯ್ವನು 'ಎಂಬ ವಿಚಾರದಲ್ಲಿ ಮಾತನಾಡಿ ಶಿಕ್ಷಕ ದಿನಾಚರಣೆಯ ಶುಭಾಶಯ ಸಲ್ಲಿಸಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ ಮೈಸೂರು ವಿಭಾಗೀಯ ಅಧ್ಯಕ್ಷ ರಂಗ ನಿರ್ದೇಶಕ ಎನ್.ವಿ.ರಮೇಶ್  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ  ಶ್ರೀ ಕಾಂತ ಕೆ.ವಿ.ಹೊಸಕೋಟೆ ಉಪಸ್ಥಿತರಿದ್ದರು.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ 
 ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶಿಕ್ಷಕಿ ಶಾಂತಾ ಪುತ್ತೂರು ‌ಸಾಗತಿಸಿದರು.ಮಂಗಳೂರು‌ ಸಮಿತಿ‌‌ ಅಧ್ಯಕ್ಷೆ ಶಿಕ್ಷಕಿ ರೇಖಾ ಸುದೇಶ್ ರಾವ್ ಕಾರ್ಯಕ್ರಮ  ನಿರೂಪಿಸಿದರು.ಅಪೂರ್ವ ಕಾರಂತ ವಂದಿಸಿದರು.

ಸ್ವರ್ಣ ಸಂಭ್ರಮದ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಣೆ

ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಿನ್ನಿಗೋಳಿ ಇದರ ಸ್ವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಿಸಲಾಗುತ್ತಿದೆ. 1974ರಲ್ಲಿ ಪ್ರಾರಂಭಗೊಂಡ ಕಿನ್ನಿಗೋಳಿಯ ಹೆಮ್ಮೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಈ ಬಾರಿ 50ರ ಸಂಭ್ರಮ. ಈ ಸಂಭ್ರಮವನ್ನು ಸ್ಮರಣೀಯವಾಗಿಸಲು ಶ್ರೀ ವಿನಾಯಕನಿಗೆ ರಜತಪೀಠ ರಚನೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸುಮಾರು 8-10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಜತಪೀಠದ ರಚನೆಗೆ ಅನಿವಾಸಿ ಭಾರತೀಯ ಧನಂಜಯ ಶೆಟ್ಟಿಗಾರ್‌ ಸಂಚಾಲಕತ್ವದಲ್ಲಿ ನಿರ್ಮಾಣಗೊಳ್ಳುತ್ತಿದೆ.
ದುಬೈ ಸಮಿತಿಯ ಧನಂಜಯ ಶೆಟ್ಟಿಗಾರ್‌, ರಮೇಶ್‌ ಶೆಟ್ಟಿಗಾರ್‌, ಆನಂದ ಸಾಲ್ಯಾನ್‌ ನೇತೃತ್ವದಲ್ಲಿ, ಕುಶಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ, ಕೆ. ಭುವನಾಭಿರಾಮ ಉಡುಪ ಗೌರವಾಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಈ ರಜತ ಪೀಠ ನಿರ್ಮಾಣಗೊಂಡಿದೆ. ಗಣೇಶೋತ್ಸವದ ದಿನ ಈ ರಜತ ಪೀಠ ಸಮರ್ಪಣೆಯಾಗಲಿದೆ ಎಂದು ಸಮಿತಿ ಸದಸ್ಯರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, September 5, 2024

ಭೀಕರ ರಸ್ತೆ ಅಪಘಾತ,ಯುವಕ ದುರ್ಮರಣ

ಸುರತ್ಕಲ್ : ಭೀಕರ ರಸ್ತೆ ಅಪಘಾತಕ್ಕೆ ಯುವಕನೊರ್ವ  ಸಾವನ್ನಪಿದ ಘಟನೆ  ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಜಂಕ್ಷನ್ ಬಳಿ  ಗುರುವಾರ ಬೆಳಗ್ಗೆ ನಡೆದಿದೆ.
ಹಳೆಯಂಗಡಿ ಇಂದಿರಾನಗರ ನಿವಾಸಿ ಗಣೇಶ ದೇವಾಡಿಗ (27)  ಮೃತ ಯುವಕ ಎಂದು ತಿಳಿದು ಬಂದಿದೆ.
ಗಣೇಶ ಅವರು ಪಣಂಬೂರು ಬಂದರ್ ನಲ್ಲಿ ಉದ್ಯೋಗದಲ್ಲಿದ್ದು, ಬೆಳಗ್ಗೆ 7ಗಂಟೆಯ ಸುಮಾರಿಗೆ ಕೆಲಸಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.

ಮುಕ್ಕ ಜಂಕ್ಷನ್ ನಲ್ಲಿ ಹಾಕಲಾಗಿದ್ದ ಬ್ಯಾರಿಕೆಟ್ ಬಳಿ ಸ್ಕೂಟರ್ ನಿಧಾನಿಸಿದಾಗ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆ ದಾಖಲಿಸಿದ್ದು, ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Wednesday, September 4, 2024

ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ ನೂತನ ಅಧ್ಯಕ್ಷರಾಗಿ ಮೋಹನ್ ಪೂಜಾರಿ ಆಯ್ಕೆ

 
ತೋಕೂರು:ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ 5ನೇ ವಾರ್ಷಿಕ ಮಹಾಸಭೆಯು ಸೆ.1   ರಂದು ಇಲ್ಲಿನ  ಓಂಕಾರೇಶ್ವರಿ ಮಂದಿರದಲ್ಲಿ ಅಧ್ಯಕ್ಷ  ಸದಾಶಿವ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ನೂತನ ಪದಾಧಿಕಾರಿಗಳ  ಆಯ್ಕೆಯು ನಡೆಯಿತು. ಗೌರವಾಧ್ಯಕ್ಷರಾಗಿ ಜಯಕೃಷ್ಣ ಕೋಟ್ಯಾನ್, ಅಧ್ಯಕ್ಷರಾಗಿ ಮೋಹನ್ ಪೂಜಾರಿ ಸುಬ್ರಹ್ಮಣ್ಯ ನಗರ, ಉಪಾಧ್ಯಕ್ಷರಾಗಿ  ಸಂಪತ್ ಜೆ ಶೆಟ್ಟಿ ಮತ್ತು ಪದ್ಮರಾಜ್ ಕರ್ಕೇರ, ಪ್ರಧಾನ ಕಾರ್ಯದರ್ಶಿಯಾಗಿ ಭಾಸ್ಕರ್ ಅಮೀನ್ ತೋಕೂರು, ಜೊತೆ ಕಾರ್ಯದರ್ಶಿಗಳಾಗಿ  ಶ್ರೀನಿವಾಸ , ಶ್ರೀಮತಿ ಪ್ರೇಮಲತಾ ಯೋಗೀಶ್ ,ಕೋಶಾಧಿಕಾರಿಯಾಗಿ ನವೀನ್ ಚಂದ್ರ ಅಮೀನ್, ಆಂತರಿಕ ಲೆಕ್ಕ ಪರಿಶೋಧಕರಾಗಿ  ಹಿಮಕರ್ ಟಿ. ಸುವರ್ಣ ಕಲ್ಲಾಡಿ, ಸಂಘಟನಾ ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಮೋಹನ್ ಪೂಜಾರಿ ಅವರು  ಮಾತನಾಡಿ ಯಕ್ಷಗಾನ ಕಲೆಯನ್ನು ಇನ್ನಷ್ಟು ಉಳಿಸುವ ಪ್ರಯತ್ನ ನಮ್ಮಿಂದ ಆಗಬೇಕಿದೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. 

ಉಪಾಧ್ಯಕ್ಷರಾದ ಸಂಪತ್ ಜೆ ಶೆಟ್ಟಿ ಮಾತನಾಡಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ನಮ್ಮೆಲ್ಲರ ಪರಿಶ್ರಮ ಅಗತ್ಯ ಎಂದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಅಮೀನ್ ತೋಕೂರು  ವಾರ್ಷಿಕ ಆಯವ್ಯಯದ ಮಂಡನೆಯನ್ನು ಮಂಡಿಸಿದರು. ಶ್ರೀಮತಿ ಕುಸುಮ  ಪ್ರಾರ್ಥಿಸಿದರು.  ಭಾಸ್ಕರ್ ಅಮೀನ್ ತೋಕೂರು ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ವಿವಿಯಲ್ಲಿ ಅವ್ಯವಹಾರ, ಉದ್ಯೋಗ ನೀಡಿಕೆಯಲ್ಲಿ ಬೇಧಭಾವ -ದಲಿತ ಸಂಘರ್ಷ ಸಮಿತಿ ಆರೋಪ

 


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸರಕಾರದ ನಿಯಮಗಳನ್ನು ಮೀರಿ ಕಾರ್ಯಾಚರಣೆ ನಡೆಯುತ್ತಿದೆ. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಿರಿಸಿದ ಹುದ್ದೆಗಳನ್ನು ಮೇಲ್ಜಾತಿಯವರಿಗೆ ನೀಡಲಾಗುತ್ತಿದೆ. ಅನೇಕ ಹುದ್ದೆಗಳು ಖಾಲಿಯಿದ್ದು ಸರಕಾರದ ಆದೇಶ ಇದ್ದರೂ ಎಸ್ ಸಿ, ಎಸ್ ಟಿ ಸಮುದಾಯದ ನಿರುದ್ಯೋಗಿ ಯುವಜನತೆಗೆ ಉದ್ಯೋಗ ನೀಡಲಾಗುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅರುಣ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು. 

ವಿದ್ಯಾಸಂಸ್ಥೆಗಳಲ್ಲಿ ರಾಜಕಾರಣಕ್ಕೆ ಪ್ರಚೋದನೆ ನೀಡುವ ಯಾವುದೇ ಕೆಲಸವನ್ನು ಮಾಡಬಾರದು. ಇಲ್ಲಿ ವಿವಿಧ ಹುದ್ದೆಗಳಿಗೆ ಸ್ಪೀಕರ್ ಮತ್ತಿತರ ಜನಪ್ರತಿನಿಧಿಗಳ ರೆಫರೆನ್ಸ್ ಲೇಟರ್ ತರುವುದು, ಇನ್ಫ್ಲುಯೆನ್ಸ್ ಮಾಡುವುದು ನಡೆಯುತ್ತಿದೆ. ಇದನ್ನು ವಿಶ್ವವಿದ್ಯಾನಿಲಯ ಮತ್ತು ಜನಪ್ರತಿನಿಧಿಗಳು ನಿಲ್ಲಿಸಬೇಕು. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಉದ್ಯೋಗ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ“ ಎಂದವರು ಎಚ್ಚರಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ವಿಶ್ವನಾಥ ಬೆಳ್ಳಂಪಳ್ಳಿ, ಸದಾಶಿವ ಹಳೆಯಂಗಡಿ, ಜಿಲ್ಲಾ ಖಜಾಂಜಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯರನ್ನು ಮಕ್ಕಳಂತೆ ಪೋಷಿಸಬೇಕು - ಶೇಖರ ಶೆಟ್ಟಿ


 ಬಜಪೆ: ಮನೆಯಲ್ಲಿ ಮಕ್ಕಳನ್ನು ನಾವು ಹೇಗೆ ಪ್ರೀತಿಯಿಂದ ಬೆಳೆಸುತ್ತೇವೆಯೋ, ಅದೇ ರೀತಿ ಹಿರಿಯರನ್ನೂ ಪ್ರೀತಿ ಮತ್ತು ಗೌರವದಿಂದ ಪೋಷಿಸಿದಾಗ ಮಾತ್ರ ಮಾನವೀಯ ಗುಣ ಸಾರ್ಥಕ್ಯ ಕಂಡುಬರುತ್ತದೆ ಎಂದು ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಶೇಖರ ಶೆಟ್ಟಿ ಹೇಳಿದರು.

    ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ, ಲಯನ್ಸ್ ಕ್ಲಬ್ ಕಟೀಲು ಎಕ್ಕಾರು ವತಿಯಿಂದ ತೆಂಕ ಎಕ್ಕಾರು ಕಾವರ ಮನೆಯಲ್ಲಿ  ಹರಿಣಾಕ್ಷಿ ಟಿ. ಶೆಟ್ಟಿ ಅವರಿಗೆ ನಡೆದ   ಸನ್ಮಾನ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಕಾಟಿಪಳ್ಳ ಕೃಷ್ಣಾಪುರ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ದೀಪಕ್ ಪೆರ್ಮುದೆ ,ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್  ಹೆಗ್ಡೆ ಕಾವರಮನೆ(ತಿಮ್ಮ ಕಾವ),  ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ನಾ ಕಾರ್ಯದರ್ಶಿ ಡಾ.ಸಂತೋಷ್ ಆಳ್ವ, ಕೋಶಾಧಿಕಾರಿ ಅನುಪಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ದಯಾನಂದ ರೈ, ಮಾಜಿ ಕಾರ್ಯದರ್ಶಿ ಗಂಗಾಧರ ಅಮೀನ್, ಸದಸ್ಯ ಚಂದ್ರಶೇಖರ್ ಅಮೀನ್, ಶ್ವೇತಾ ದುರ್ಗಾಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.



ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

 


ಬಜಪೆ: ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಇಲ್ಲಿ 16 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾಲತಾ ಅವರು 2024ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಅವರ ತರಬೇತಿಯೊಂದಿಗೆ ಶಾಲಾ ಬಾಲಕಿಯರ ತಂಡ ಖೋಖೋ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ 4×100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಈ ಹಿಂದೆ ಶಾಲಾ ವಿದ್ಯಾರ್ಥಿಗಳು ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಶಾಲೆಯನ್ನು ಇವರ ತರಬೇತಿಯೊಂದಿಗೆ ಪ್ರತಿನಿಧಿಸಿದ್ದರು. ವಿಜ್ಞಾನ ನಾಟಕ, ವಿಜ್ಞಾನ ಮಾದರಿ ಸ್ಪರ್ಧೆ, ಯೋಗ, ಧ್ಯಾನ, ಕರಾಟೆಗಳ ಬಗ್ಗೆಯೂ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಾರೆ. 2019-20ರಲ್ಲಿ ಐಸಿಟಿ ತರಬೇತಿ ಪಡೆದು ಉತ್ತಮ ಸಂಪನ್ಮೂಲ ಶಿಕ್ಷಕಿಯಾಗಿ ಕಾರ್ಯಾಗಾರಗಳನ್ನು ನಿರ್ವಹಿಸುತ್ತಿದ್ದಾರೆ.

ಕಟೀಲು ಕ್ಷೇತ್ರ ಶೈಕ್ಷಣಿಕ ಮತ್ತು ಯಕ್ಷಗಾನಗಳ ಪಾರಂಪರಿಕ ಕ್ಷೇತ್ರ - ಸುರೇಶ್ ಕಟೀಲ್

ಕಟೀಲು:ಕಟೀಲು‌ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾಗಿದ್ದರೂ ಶೈಕ್ಷಣಿಕ ಕ್ಷೇತ್ರವಾಗಿಯೂ ಬೆಳೆಯುತ್ತಿದೆ. ಯಕ್ಷಗಾನ ಕಲೆಗ...